ಡಿಯರ್ ವಂಡರ್ಫುಲ್ ಸೆಲ್ಫ್,
ಎಲ್ಲಾ ಗುರುಗಳು ಹಾಗೂ ಧರ್ಮಗಳು, ಎಲ್ಲರೆಡೆಗೆ ಪೀತಿಯಿಟ್ಟುಕೊಳ್ಳುವುದನ್ನು ಮೋಕ್ಷ ಅಥವಾ ಮುಕ್ತಿಗೆ ಅಗತ್ಯವಾದ ಹೆಜ್ಜೆ ಎಂದು ಒತ್ತಿ ಹೇಳಿದ್ದಾರೆ.
ಮೂಲಭೂತವಾಗಿ ಪ್ರೀತಿ ಎಂದರೆ, ಇಷ್ಟ ಮತ್ತು ಇಷ್ಟವಿಲ್ಲದಿರುವಿಕೆಯನ್ನು ದಾಟಿ ಹೋಗುವುದು ಎಂದರ್ಥ. ನಾನು ಒಂದನ್ನು ಇಷ್ಟಪಡುತ್ತೇನೆ ಮತ್ತು ಇನ್ನೊಂದನ್ನು ಇಲ್ಲ - ಈ ಹಂತದಲ್ಲಿ ಪ್ರೀತಿ ಸಾಧ್ಯವೇ ಇಲ್ಲ, ಏಕೆಂದರೆ ನಾವು ನಮ್ಮ ಅಹಂ ಗೆ ಅನುಕೂಲಕರವಾಗಿರುವ ಅಥವಾ ಅದನ್ನು ಬೆಂಬಲಿಸುವ ಸಂಗತಿಗಳನ್ನು ಮಾತ್ರ ಇಷ್ಟಪಡುತ್ತೇವೆ.
ಪ್ರೀತಿ ಎಂದರೆ ನಮ್ಮನ್ನು ಸಂಪೂರ್ಣವಾಗಿ ಕರಗಿಸಬಲ್ಲ ರಸವಿದ್ಯೆ. ಹಾಗಾಗಿಯೇ ಆಂಗ್ಲದಲ್ಲಿ ‘Falling in love' (ಪ್ರೀತಿಯಲ್ಲಿ ಬೀಳುವುದು) ಎಂದು ಹೇಳುವರು, ಪ್ರೀತಿಯಲ್ಲಿ ನಿಲ್ಲುವುದು ಅಥವಾ ಪ್ರೀತಿಯಲ್ಲಿ ಏರುವುದು ಎನ್ನುವುದಿಲ್ಲ. ಬೀಳುವುದರಲ್ಲಿ ಮಾತ್ರ ಪ್ರೀತಿಯಿರಲು ಸಾಧ್ಯ. ‘ನೀವು’ ಇಲ್ಲದಿದ್ದರೆ, ಪ್ರೀತಿ ಇರಲು ಸಾಧ್ಯ. ಒಬ್ಬರು ಮಾಡುವ ಎಲ್ಲಾ ಸಾಧನಗಳು ಪ್ರೀತಿಯಿಲ್ಲದಿದ್ದರೆ, ಒಂದು ಬರಡು ಹಾಗೂ ಫಲಪ್ರದವಲ್ಲದ ಪ್ರಯತ್ನವಾಗುತ್ತದೆ. ಅನೇಕರಿಗೆ, ಅವರ ಧ್ಯಾನ ಮತ್ತು ಇತರ ಅಭ್ಯಾಸಗಳು, ಮತ್ತು ಯೋಗ ಕಾರ್ಯಕ್ರಮಗಳು ಚೈತನ್ಯದ ಏರಿಳಿತದ ತೂಗುಯ್ಯಾಲೆಯಾಗುತ್ತದೆ, ಏಕೆಂದರೆ ಅವರು ಅಮಿತವಾದ ಪ್ರೀತಿಯ ಹೆಜ್ಜೆಯನ್ನು ಇಟ್ಟಿಲ್ಲ.
ಪ್ರೀತಿ ಅಂತಿಮವಾದುದಲ್ಲ, ಆದರೆ ಅಂತಿಮದೆಡೆಗೆಮಹತ್ತರವಾದ ಹೆಜ್ಜೆ. ಪ್ರೀತಿಯಿಲ್ಲದೆ, ಅನೇಕರು ತಲುಪುವುದೇ ಇಲ್ಲ. ಗೌತಮ ಬುದ್ಧ, ಮುಕ್ತಿ ಅಥವಾ ನಿರ್ವಾಣಕ್ಕಾಗಿ ಅನೇಕ ರೀತಿಯ ಸಾಧನಗಳನ್ನು ಮಾಡಿದ ನಂತರ, ಮುಂದಿನ ಬಾರಿ ನಾನು ಮೈತ್ರೇಯನಾಗಿ ಬರುವೆ ಎಂದು ಹೇಳಿದ. ಮೈತ್ರೇಯ ಎಂದರೆ ಗೆಳೆಯ ಅಥವಾ ಪ್ರೀತಿ, ಹಾಗೆಂದರೆ ಮುಂದಿನ ಬಾರಿ ನನ್ನ ಗುಣ ಪ್ರೀತಿಯದ್ದಾಗಿರುತ್ತದೆ ಎಂದು. ಪ್ರೀತಿಯ ಸಾಂಗತ್ಯವಿಲ್ಲದಿದ್ದರೆ, ಸಾಧನಗಳು ಅಹಂನನ್ನು ಪೋಷಿಸುವ ವಿಧಾನಗಳಾಗುತ್ತವೆ.
ನಿಮ್ಮ ಪ್ರೀತಿ ಅರಳಲಿ ಹಾಗೂ ಅದರ ಸುವಾಸನೆಯು ಎಲ್ಲ ಜೀವಿಗಳಿಗೂ ಅನಿಯಮಿತವಾಗಿ ಹರಡಲಿ.
ಪ್ರೀತಿ ಮತ್ತು ಆಶೀರ್ವಾದಗಳು
ಸದ್ಗುರು
(ಅಧಿಕೃತ ಭಾಷಾಂತರ ಅಲ್ಲ)

No comments:
Post a Comment