ದೇವಿ ಆರಾಧನೆ - ಇದು ಭಾರತದಲ್ಲಿ ಮಾತ್ರ ಇನ್ನೂ ಜೀವಂತವಿರುವ ಪರಂಪರೆ.
ಭಾರತದ ಮೂಲೆಮೂಲೆಗಳಲ್ಲಿ, ಪ್ರತೀ ಹಳ್ಳಿಯಲ್ಲಿ, ಅದೂ ದಕ್ಷಿಣ ಭಾರತದಲ್ಲಿ, ದೇವಿ ಗುಡಿಗಳು, ಆರಾಧನೆಗಳು ಕಾಣಸಿಗುತ್ತವೆ. ಸ್ತ್ರೀತತ್ವದ ಅಭೂತಪೂರ್ವ ಮಹತ್ವವನ್ನು ಹಾಗೂ ಅವಶ್ಯಕತೆಯನ್ನು ಅರಿತ ಪ್ರಪ್ರಥಮ ಸಂಸ್ಕೃತಿಗಳಲ್ಲಿ ಒಂದು.
ಇದು ಕೇವಲ ನಂಬಿಕೆಯೇ? ಒಂದಷ್ಟು ಜನ ಮೂಢವಾಗಿ ಪಾಲಿಸಿಕೊಂಡುಬಂದಿರುವ ಒಂದು idea ಅಷ್ಟೇನಾ? ಖಂಡಿತ ಅಲ್ಲ.
ದೇವಿ ಗುಡಿಗಳು, ಅತ್ಯಂತ ಸೂಕ್ಕ್ಷ್ಮರೀತಿಯಲ್ಲಿ ಪ್ರತಿಷ್ಠೆಯಾಗಿರುತ್ತಿದ್ದವು. ಈ ಹಳ್ಳಿಯಲ್ಲಿ ಒಂದು ಗ್ರಾಮದೇವತೆಯಿದ್ದರೆ, ಪಕ್ಕದ ಹಳ್ಳಿಯಲ್ಲಿ ಇನ್ನೊಂದು. ಇದು ಕೇವಲ ಜನರ ಮನಸ್ಸಿನ ಒಂದು ನಂಬಿಕೆ ಅಷ್ಟೇ ಅಲ್ಲ. ಆ ಆ ಹಳ್ಳಿಯ ಅವಶ್ಯಕತೆಗೆ ತಕ್ಕಂತೆ, ದೇವಿಗುಡಿಗಳನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. This Nation knows the technology of God Making. ದೇವರನ್ನು ಪ್ರತಿಷ್ಠಾಪಿಸುವ ಸಂಪೂರ್ಣ ವಿಜ್ಞಾನ ಈ ದೇಶದ ಋಷಿ ಮುನಿಗಳಿಗೆ, ಯೋಗ ಪರಂಪರೆಗೆ ತಿಳಿದಿತ್ತು.
ಹೀಗೆ ಪ್ರತಿಷ್ಠಾಪಿಸಿದ ದೇವತೆ, ಅದ್ಭುತವಾಗಿ ಕೆಲಸ ಮಾಡುತ್ತಿತ್ತು ಕೂಡ. ಚಾಮುಂಡೇಶ್ವರಿ, ಮೈಸೂರಿನ ಸುರಕ್ಷತೆಗೆ ಸ್ಥಾಪಿಸಲ್ಪಟ್ಟ ದೇವತೆ ಎಂಬ ನಂಬಿಕೆ ರಾಜಮನೆತನದಲ್ಲಿ ಇತ್ತು. ಇಡೀ ಭಾರತ ಬ್ರಿಟೀಷರ ಕಪಿಮುಷ್ಟಿಯಲ್ಲಿ ನಡುಗಿದರೂ, ಪಕ್ಕದ ಶ್ರೀರಂಗಪಟ್ಟಣದಲ್ಲೇ ಟಿಪ್ಪುವಿದ್ದರೂ, ಮೈಸೂರನ್ನು ಮುಟ್ಟಲಾಗಲಿಲ್ಲ. ಗ್ರಾಮದೇವತೆ ಸಂಸ್ಥಾನವನ್ನು ಕಾಯ್ದು ಹರಸಿದ್ದಳು.
ಶ್ರೀನಿವಾಸ ರಾಮಾನುಜಮ್ ನಿಮಗೆಲ್ಲ ತಿಳಿದಿರಲೇಬೇಕು. ಭಾರತ ಏನು, ವಿಶ್ವವೇ ಕಂಡ ಅದ್ಭುತ ಗಣಿತಜ್ಞ. ರಾಮಾನುಜಮ್ ಬಿಡಿಸುತ್ತಿದ್ದ ಗಣಿತ ವ್ಯಾಖ್ಯಾನಗಳಿಗೆ ಇಡೀ ವಿಶ್ವವೇ ನಿಬ್ಬೆರಗಾಗಿ ಹೋಗಿತ್ತು. ಪಾಶ್ಚಾತ್ಯ ಗಣಿತಜ್ಞರಿಗೆ ಮನುಷ್ಯರಿಗೆ ಇಂಥದ್ದು ಸಾಧ್ಯ ಎಂದೇ ಗೊತ್ತಿರಲಿಲ್ಲ. ಥಿಯರಿಯೂ ರೆಡಿಯಿರದಿದ್ದ, ವಿಜ್ಞಾನ ಪ್ರಪಂಚದಲ್ಲಿ ಇನ್ನೂ conceptualization ಕೂಡ ಆಗದಿದ್ದ ‘ಬ್ಲಾಕ್ ಹೋಲ್’ ಮುಂತಾದ ವಿಷಯಗಳ ಗಣಿತ ಸಮೀಕರಣವನ್ನು, ರಾಮಾನುಜಮ್ 20ನೇ ಶತಮಾನದ ಆದಿಯಲ್ಲೇ ಬಿಚ್ಚಿಡಲು ಪ್ರಾರಂಭಿಸಿದ್ದರು. ಈತ ಗಣಿತವನ್ನು ಬರೆಯುತ್ತಿರಲಿಲ್ಲ, ಸುರಿಯುತ್ತಿದ್ದರು.
ಕುತೂಹಲ ತಡೆಯಲಾರದ ಗಣಿತ ವಿದ್ವಾಂಸರು, “ರಾಮನುಜಮ್, ಇದು ಹೇಗೆ ಸಾಧ್ಯ?” ಎಂದು ಕೇಳಿದಾಗ, ರಾಮಾನುಜಮ್ ಹೇಳಿದ್ದಿಷ್ಟು: My Devi Bleeds Mathematics!
“ನನ್ನ ದೇವಿ ಗಣಿತವನ್ನು ಹರಿಸುತ್ತಾಳೆ!”
ಇದು ಭಾರತದಲ್ಲಿ ಆಗಿಹೋದ ಅನೇಕ ಜ್ಞಾನಿಗಳ, ವಿಜ್ಞಾನಿಗಳ ವಿಷಯದಲ್ಲಿ ನಿಜ. ಈಗಿನವರಲ್ಲ, ಪುರಾತಕಾಲದ ವಿಜ್ಞಾನಿಗಳ ಕುರಿತು ಹೇಳಿದ್ದು.
ಈ ವಿಜ್ಞಾನ ನಮ್ಮಲ್ಲಿ ಕ್ಷೀಣಿಸುತ್ತಿರುವುದು, ನಾವು ಪಾಶ್ಚಾತ್ಯರಿಗಿಂತ ಪಾಶ್ಚಾತ್ಯರ ರೀತಿಯಲ್ಲಿ ಆಡುತ್ತಿರುವುದು, ಮೂರ್ಖತನವಲ್ಲದೇ ಮತ್ತೇನು ಅಲ್ಲ.
ವಿಜಯದಶಮಿ ನಮಗೆ ವಿಜಯವನ್ನು ತರಲಿ.


